ಇವರೇ ಕನ್ನಡ ಚಿತ್ರರಂಗದ ರಣವೀರ್ ಸಿಂಗ್! - ShortCut | Filmibee

by February 10, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ವರನಟ ಡಾ. ರಾಜ್ ಕುಮಾರ್ ಕುಟುಂಬದಿಂದ ಮತ್ತೋರ್ವ ನಾಯಕ ನಟ,ಧೀರೇನ್ ರಾಮ್ ಕುಮಾರ್ ಚಿತ್ರರಂಗಕ್ಕೆ ಕಾಳಿಡುತ್ತಿರುವ ವಿಚಾರ ಈಗಾಗಲೇ ನಿಮಗೆ ತಿಳಿದಿರಬಹುದು. ಸಾಕಷ್ಟು ನಿರ್ಮಾಪಕರುಗಳು ಧೀರೇನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ಆದರೆ, ಸದ್ಯ ಕೇಳಿಬರುತ್ತಿರುವ ಮಾತುಗಳ ಪ್ರಕಾರ, ನಿರ್ಮಾಪಕ ಜಯಣ್ಣ ಧೀರೇನ್ ಸಿನಿಮಾ ನಿರ್ಮಾಣ ಮಾಡವ ಸಾಧ್ಯತೆಗಳಿವೆ ಅಂತೆ. ಒಳ್ಳೆ ಕಥೆ ಹಾಗೂ ನಿರ್ದೇಶಕರಿಗಾಗಿ ಹುಡುಕಾಟ ಶುರುವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಧೀರೇನ್. ಅಂದಹಾಗೆ, ಧೀರೇನ್ ಅವರ ಹೊಸ ಫೋಟೋಶೂಟ್ ಚಿತ್ರಗಳು ವೈರಲ್ ಆಗಿದ್ದು, ನೋಡಿದ ಹಲವರು ಕನ್ನಡ ಚಿತ್ರರಂಗದ ರಣವೀರ್ ಸಿಂಗ್ ಎನ್ನುತ್ತಿದ್ದಾರೆ.

Read more at Filmibeat Kannada - Click Here

You May Also Like:

0 comments:

Post a Comment